Chitralahari
ಕರ್ನಾಟಕದಲ್ಲಿ ಸಿನಿಮಾ,ರಾಜಕೀಯ, ಸುದ್ದಿ, ಕ್ರೀಡೆ, ಅಪರಾದ ಕುರಿತ ೨೦ಕ್ಕೂ ಹೆಚ್ಚು ಚಾನಲ್‌ಗಳು ಬಂದಿವೆ. ಈಗ ‘ಸರಳ ಜೀವನ’ ಎನ್ನುವ ಹೊಸ ವಾಹಿನಿ ಫೆಬ್ರವರಿ ೧೯ರಿಂದ ಪ್ರಸಾರವಾಗುತ್ತಿದೆ. ಸರಳವಾಸ್ತು ತಜ್ಘ ಖ್ಯಾತಿ ಡಾ.ಚಂದ್ರಶೇಖರ್ ಗುರೂಜಿರವರು ಪ್ರಾರಂಭಿಸಿರುವ ವಾಹಿನಿಯಲ್ಲಿ ಮಖ್ಯವಾಗಿ ಮಹಾಪಯಣ, ಮನುಕುಲದ ಒಳಿತಿಗಾಗಿ, ಜ್ಘಾನಪದ, ಸಾಧುಪರಂಪರೆ, ಹಿಸ್ಟರಿ, ಮಣ್ಣಿನ ಮಗ ಅಲ್ಲದೆ ಮಹಿಳಿಯರಿಗೆ ಮೀಸಲಾದ ಕಾರ್ಯಕ್ರಮ ಇರುತ್ತದೆ. ಮಹಾಪಯಣದಲ್ಲಿ ರಾಮನ ಜನ್ಮ ಸ್ಥಳ, ಅವರು ನಡೆದಾಡಿದ ದಾರಿ ಇನ್ನು ಹಲವು ಕುತೂಹಲಕಾರಿ ಅಂಶಗಳನ್ನು ಅದೇ ಜಾಗದಲ್ಲಿ ಚಿತ್ರೀಕರಿಸಿರುವುದು ವಿಶೇಷ. ಮನುಕುಲದ ಒಳಿತಿಗಾಗಿ ಸಂಬಂದಿಸಿದಂತೆ ಪ್ರತಿ ನಿತ್ಯ ಸರಳ ಜೀವನ, ಉಪಹಾರ, ಆರೋಗ್ಯ, ಯೋಗ , ಶಿಕ್ಷಣ, ಸಂಬಂದ ಇವೆಲ್ಲವನ್ನು ಗುರೂಜಿರವರು ಮಾತನಾಡಲಿದ್ದಾರೆ. ಹಿಸ್ಟರಿಯಲ್ಲಿ ಅಜ್ಜಿ ಹೇಳಿದ ಕತೆ, ಇತಿಹಾಸ, ಸಾಧುಪರಂಪರೆಯಲ್ಲಿ ಆಧ್ಯಾತ್ಮಕ ಗುರುಗಳು, ಧಾರ್ಮಿಕ ಪ್ರತಿನಿಧಿಗಳು, ವಿಭಿನ್ನ ಆಚರಣೆಗಳು, ನಿಗೂಡ ರಹಸ್ಯಗಳನ್ನು ತೋರಿಸಲಾಗುತ್ತದೆ.