ತುಂಬಾನೇ ಟೇಸ್ಟಿಯಾಗಿರುತ್ತೆ ಈ ಆಲೂ ಜಾಮೂನ್​ ..!

ಜಾಮೂನ್ಅಂದ್ರೆ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಇಷ್ಟಪಟ್ಟು ತಿನ್ನೋ ತಿಂಡಿ ಇದು . ಮಕ್ಕಳು ಜಾಮೂನ್ಮಾಡಿಕೋಡು ಅಂತ ಹೇಳಿದಾಗ ದಿಢೀರ್ಆಗಿ ಮಾಡಬಹುದು ಈ ಆಲೂ ಜಾಮೂನ್. ಅರೇ ಆಲೂಗಡ್ಡೆಯಲ್ಲೂ ಜಾಮೂನ್ಮಾಡೋದು ಹೇಗೆ ಅಂತ ಯೋಚಿಸ್ತಿದ್ದೀರ..? ಬನ್ನಿ ಈ ಸ್ಪೆಷಲ್ರೆಸಿಪಿನ ಮಾಡೋದು ಹೇಗೆ ಅಂತ ನೋಡ್ಕೋಂಡ್ಬರೋಣ ..

Aloo Jamun recipe-Saral Jeevan-Food

ಆಲೂ ಜಾಮೂನ್ತಯಾರಿಸಲು ಬೇಕಾಗುವ ಪದಾರ್ಥಗಳು :

ತುಪ್ಪ– 2 ಟೀ ಸ್ಪೂನ್

ಮೈದಾ ಹಿಟ್ಟು -1/4 ಕಪ್

ಬೇಯಿಸಿರುವ ಆಲೂ -1/2

ಹಾಲಿನ ಪುಡಿ – 1/2 ಕಪ್

ಸಕ್ಕರೆ – 3/4 ಕಪ್

 

ಮಾಡುವ ವಿಧಾನ :

1. ಮೊದಲು ಮಿಕ್ಸಿಂಗ್ಬೌಲ್​ಗೆ ಬೆಯಿಸಿರುವ ಆಲೂವನ್ನ ಹಾಕಿ ಚೆನ್ನಾಗಿ ಸ್ಮ್ಯಾಶ್​​ ಮಾಡಿ .

2.ಆಲೂಗಡ್ಡೆ ಸ್ಮ್ಯಾಶ್ಮಾಡೋದ್ರೊಳಗೆ ನಿಮಗೆ ಆಗೂಗಡ್ಡೆ ಬಗ್ಗೆ ಒಂದು ಇಂಟರೆಸ್ಟಿಂಗ್ವಿಷಯ ಹೇಳಲೇ ಬೇಕು . ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬಕ್ಕೆ ಸೇರಿಸಿ ಗೆಡ್ಡೆ ಬೆಳೆಯಾಗಿದೆ. ಆಲೂಗಡ್ಡೆಯು ಅಕ್ಕಿ, ಗೋಧಿ, ಮತ್ತು ಮೆಕ್ಕೆ ಜೋಳದ ನಂತರ, ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿವೆ.ಏನ್ಗೊತ್ತ ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್‌ ಎನ್ನೋ ಅಂಶ ದೇಹದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ತಡೆಯಲು ಸಹಕಾರಿಯಂತೆ .

3. ಈಗ ಸ್ಮ್ಯಾಶ್ಮಾಡಿರುವ ಆಲೂಗೆ ಅರ್ಧ ಕಪ್​ನಷ್ಟು ಹಾಲಿನ ಪುಡಿಯನ್ನ ಹಾಕಿ ಚೆನ್ನಾಗಿ ಮಿಕ್ಸ್ಮಾಡಿ .

4. ನಂತರ ಹಾಲಿನ ಪುಡಿ ಇರೋ ಮಿಕ್ಸಿಂಗ್ಬೌಲ್​ಗೆ ಕಾಲು ಕಪ್ಮೈದಾಹಿಟ್ಟನ್ನ ಹಾಕಿ ಚೆನ್ನಾಗಿ ಕಲಸಿ .

5.ಈಗ ಬೌಲ್​ನಲ್ಲಿರುವ ಮಿಶ್ರಣಕ್ಕೆ ಎರಡು ಟೀ ಸ್ಪೂನ್ತುಪ್ಪವನ್ನು ಹಾಕಿ ಕೈನಿಂದ ಚೆನ್ನಾಗಿ ಕಲಸಿ .

6.ತುಪ್ಪದಲ್ಲಿ ಫ್ಯಾಟ್‌ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದುದರಿಂದ ಹೆಚ್ಚಿನ ಜನರು ತಮ್ಮನ್ನು ತಾವು ಫಿಟ್‌ ಆಗಿಟ್ಟುಕೊಳ್ಳಲು ತುಪ್ಪದ ಸೇವನೆ ಹೆಚ್ಚಾಗಿ ಮಾಡೋದಿಲ್ಲ. ನೀವು ಯಾವ ತುಪ್ಪವನ್ನ ಅಧಿಕ ಫ್ಯಾಟ್‌ ಹೊಂದಿದೆ ಎಂದು ತಿನ್ನದೆ ದೂರ ಇಡುತ್ತೀರಿ, ಅದೇ ತುಪ್ಪ ನಿಜವಾಗಿ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ, ಅನ್ನೋ ವಿಷಯ ಬಹಳಷ್ಟು ಜನರಿಗೆ ತಿಳಿದೆ ಇಲ್ಲ . ತುಪ್ಪವನ್ನಾ ಸೇವಿಸೊದ್ರಿಂದ ಮಧುಮಹವನ್ನು ಕೂಡ ನಿಯಂತ್ರಣದಲ್ಲಿ ಇಡಬಹುದಾಗಿದೆ .

7. ಆಲೂ ಜಾಮೂನ್ತಯಾರಿಸಲು ಬೇಕಾದ ಹಿಟ್ಟು ತಯಾರಾಗಿದೆ.

8. ಈಗ ಬೌಲ್​ಗನಲ್ಲಿರುವ ಆಲೂ ಮಿಶ್ರಣವನ್ನ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಒಂದು ಪ್ಲೇಟ್​ನಲ್ಲಿಡಿ .

9. ನಂತರ ಸ್ಟವ್ಮೇಲೆ ಬಾಣಲೆಯನ್ನಿಟ್ಟು ಅದಕ್ಕೆ ಮುಕ್ಕಾಲು ಕಪ್ಸಕ್ಕರೆ , ಒಂದು ಕಪ್ನೀರನ್ನು ಹಾಕಿ ಸೌಟಿನಿಂದ ಚೆನ್ನಾಗಿ ತಿರುವಿ .

10. ಸಕ್ಕರೆ ಕರಗುವವರೆಗೂ ಸೌಟಿನಿಂದ ತಿರುವುತ್ತೀರಿ .

11. ಬಾಣಲೆಯಲ್ಲಿರುವ ಸಕ್ಕರೆ ಮಿಶ್ರಣವನ್ನ ಒಂದೆಳೆ ಪಾಕ ತಯಾರಿಸಿ , ಪಕ್ಕಕ್ಕಿಡಿ .

12. ಈಗ ಸ್ಟವ್ಮೇಲೆ ಎಣ್ಣೆ ಹಾಕಿದ ಬಾಣಲೆಯನ್ನಿಡಿ .

13. ಎಣ್ಣೆ ಕಾದ ಮೇಲೆ ಪ್ಲೇಟ್​ನಲ್ಲಿರುವ ಆಲೂ ಉಂಡೆಯನ್ನ ಕಾದ ಎಣ್ಣೆಯಲ್ಲಿ ಬಿಡಿ .

14. ಆಲೂ ಉಂಡೆ ಒಂದು ಬದಿ ಬೆಂದ ನಂತರ ಮತ್ತೊಂದು ಬದಿಗೆ ತಿರುಗಿಸಿ ಬೇಯಿಸಿ .

15. ಆಲೂ ಉಂಡೆ ಬೆಂದಿದೆ , ಇದನ್ನ ಟಿಶ್ಯೂ ಹಾಕಿದ ಪ್ಲೇಟ್​ಗೆ ವರ್ಗಾಯಿಸಿ .

16. ನಂತರ ಮೊದಲೇ ಸಿದ್ಧಪಡಿಸಿರುವ ಸಕ್ಕರೆ ಪಾಕದಲ್ಲಿ ಬೇಯಿಸಿರುವ ಆಲೂ ಉಂಡೆಗಳನ್ನ ಹಾಕಿ , ಅರ್ಧ ಗಂಟೆ ಸಕ್ಕರೆಪಾಕದಲ್ಲಿ ನೆನೆಸಿದರೆ ಆಲೂ ಜಾಮೂನ್ಸವಿಯಲು ಸಿದ್ಧವಾಗುತ್ತದೆ .

17. ಈಗ ತಯಾರಿಸಿರುವ ಆಲೂ ಜಾಮೂನ್​ನನ್ನ ಸರ್ವಿಂಗ್ಬೌಲ್​ನಲ್ಲಿಟ್ಟು ಸವಿಯಲು ಕೊಡಿ .

18. ದಿಢೀರ್ಆಗಿ ಬಾಯಲ್ಲಿ ನೀರೂರಿಸೋ ಆಲೂ ಜಾಮೂನ್​ನನ್ನ ಮಾಡೋದು ಹೇಗೆ ಅಂತಾ ಮತ್ತೊಮ್ಮೆ ತೋರಿಸ್ತೀವಿ ನೋಡಿ . ಒಮ್ಮೆ ನೀವು ಟ್ರೈ ಮಾಡಿ .

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ!

Leave Comment

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

clear formSubmit